Saturday, April 25, 2009

ಪ್ರೀತಿಯ ಹುಡುಗಿಯ ಪ್ರಥಮ ಕವಿತೆ ... ನಿನ್ನ ನೆನಪು ...

ಮುಂಜಾವಿನ ಮಂಜಿನ ಮುಸುಕಿನಲಿ ಸೂರ್ಯನ ಬೆಳಕಿಗೆ
ಹೊಳೆಯುವ ಇಬ್ಬನಿಯ ಹನಿಯಂತೆ ನಿನ್ನ ನೆನಪು ...

ಚೈತ್ರದ ಚಿಗುರಿಗೆ ಮೈದುಂಬಿ ಹಾಡುವ ಹಕ್ಕಿಯ
ಚಿಲಿಪಿಲಿ ದನಿಯಂತೆ ನಿನ್ನ ನೆನಪು ...

ಬೆಳದಿಂಗಳ ರಾತ್ರಿಯಲಿ ಮೈಚುಂಬಿಸುವ ತಂಗಾಳಿಯಲಿ
ತೇಲಿ ಬರುವ ಕಣಗಿಲೆ ಹೂವಿನ ಕಂಪಿನಂತೆ ನಿನ್ನ ನೆನಪು ...

- ರಂಜನಾ ( ಯಾರಂತ ಕೇಳ್ಬೇಡಿ!!! :-) )

- ಸ್ಪೂರ್ತಿಯ ಸೆಲೆ ಗೌತು !!!

2 comments:

mruthyu.. said...

ಕವನ ಚೆನ್ನಾಗಿದೆ. ಮೊದಲಿನ ಕಲ್ಪನೆ ತುಂಬಾ ಚೆನ್ನಾಗಿದೆ. ಬರೀತಿರಿ.
ಇಬ್ಬನಿಯ ಹನಿ? ಇಬ್ಬನಿ ಅಂದ್ರೇನೆ ಮಂಜಿನ ಹನಿ ಅಂತ! ದ್ವಿರುಕ್ತಿ ಯಾಕೆ?
ಯಾವಾಗಲೋ ನಾನು ಬರೆದಿದ್ದ ಕವನ ನೆನಪಾಗ್ತಿದೆ.
"ಕಿಟಕಿ ತೆರೆ.
ತೆರೆದದ್ದೇ ತೆರೆ ಹೊರಗೆ ಮಂಜಿನ ತೆರೆ.
ಅರೆ! ಎಲ್ಲಿ ಧರೆ? ಎಲ್ಲ ಮರೆ.."
(ಮತ್ತೆ...ರಂಜನಾ ಅಂದ್ರೆ ಯಾರೂಂತ ಕೇಳಲ್ಲ. ನಾವು ವೈನಿಗರು, ರಂ ಹಾಕೋ ಜನಕ್ಕೆ ರಂಜನಾ ಅಂತೀವಿ.!! dont feel hurt. jast a pun.)

mruthyu.. said...

correction..it is not jast..read as just..