Showing posts with label Poetry. Show all posts
Showing posts with label Poetry. Show all posts

Saturday, April 25, 2009

ಪ್ರೀತಿಯ ಹುಡುಗಿಯ ಪ್ರಥಮ ಕವಿತೆ ... ನಿನ್ನ ನೆನಪು ...

ಮುಂಜಾವಿನ ಮಂಜಿನ ಮುಸುಕಿನಲಿ ಸೂರ್ಯನ ಬೆಳಕಿಗೆ
ಹೊಳೆಯುವ ಇಬ್ಬನಿಯ ಹನಿಯಂತೆ ನಿನ್ನ ನೆನಪು ...

ಚೈತ್ರದ ಚಿಗುರಿಗೆ ಮೈದುಂಬಿ ಹಾಡುವ ಹಕ್ಕಿಯ
ಚಿಲಿಪಿಲಿ ದನಿಯಂತೆ ನಿನ್ನ ನೆನಪು ...

ಬೆಳದಿಂಗಳ ರಾತ್ರಿಯಲಿ ಮೈಚುಂಬಿಸುವ ತಂಗಾಳಿಯಲಿ
ತೇಲಿ ಬರುವ ಕಣಗಿಲೆ ಹೂವಿನ ಕಂಪಿನಂತೆ ನಿನ್ನ ನೆನಪು ...

- ರಂಜನಾ ( ಯಾರಂತ ಕೇಳ್ಬೇಡಿ!!! :-) )

- ಸ್ಪೂರ್ತಿಯ ಸೆಲೆ ಗೌತು !!!

Tuesday, March 11, 2008

ಹರೆಯದ ಕವಿತ್ವ

ಯೌವನದಲ್ಲಿ ಎಲ್ಲರೂ ಕವಿಗಳಾಗುತ್ತಾರೆ. ಏಕೆ ಎಂದು ಯೋಚಿಸುತ್ತ ಕುಳಿತಿದ್ದೆ, ಮೊನ್ನೆ. ಹೀಗೆ ಯೋಚಿಸುತ್ತ ಎಲ್ಲೋ ಯಾವಾಗಲೋ ಓದಿದ್ದ ವಾಕ್ಯ ನೆನಪಾಯಿತು. ಏನಪ್ಪಾ ಅಂದ್ರೆ ಸತ್ಯ ಹೇಳುವುದಕ್ಕೆ ಬುದ್ಧಿವಂತಿಕೆ ಬೇಡ, ಆದರೆ ಸುಳ್ಳು ಹೇಳುವುದಕ್ಕೆ ಧೈರ್ಯ, ಮತ್ತು ಆ ಸುಳ್ಳನ್ನು ಸಾಧಿಸಲು ಬೇಕಾಗುವ ಬುದ್ಧಿವಂತಿಕೆ ಎರಡೂ ಬೇಕು ಅಂತ.

ಇದನ್ಯಾಕಪ್ಪಾ ಹೇಳ್ದೆ ಅಂದ್ರೆ, ಹರೆಯ ಅಥವಾ ಯೌವನದಲ್ಲಿ ಮನಸ್ಸಿನ ಭಾವನೆಗಳು ಹುಚ್ಚು ಕುದುರೆಗಳ ರೀತಿಯಲ್ಲಿ ಓಡುತ್ತಿರುತ್ತದೆ. ಲೋಕವೆಲ್ಲ ಶೃಂಗಾರಮಯವಾಗಿ ಕಾಣುತ್ತಿರುತ್ತದೆ. ಮನಸ್ಸು ಮೊದಲ ಪ್ರಾಮುಖ್ಯವನ್ನು ಈ ಭಾವನೆಗಳಿಗೇ ಕೊಡುತ್ತದೆ. ಅದನ್ನು ಅಕ್ಷರ ರೂಪಕ್ಕೆ ಇಳಿಸುವುದಷ್ಟೆ ಉಳಿಯುವುದು, ಕವನ ತಯಾರಾಗುವುದಕ್ಕೆ.

ಹಾಗಾದರೆ ಕವಿಗಳು ತುಂಬಾ ವಯಸ್ಸಾದವರು ಇದಾರಲ್ಲಾ? ಇದಕ್ಕೆ ಕಾರಣ ಇಷ್ಟೆ. ಹರೆಯದಲ್ಲಿ ಶೃಂಗಾರ ಭಾವದಿಂದ ಹೊಮ್ಮುವ ಸಾಹಿತ್ಯದ ಮೇಲೆ ಅವರು ಪ್ರೀತಿಯನ್ನು ಬೆಳೆಸಿಕೊಂಡಿರುತ್ತಾರೆ. ಆದ್ದರಿಂದಲೇ ವಯಸ್ಸಿಗೆ ಅತೀತರಾಗಿ ಕವಿಗಳೋ ಅಥವಾ ಸಾಹಿತಿಗಳೋ ಆಗುತ್ತಾರೆ.

ಇದನ್ನು ಮುಂದೊಂದು ದಿನ ಮುಂದುವರೆಸುತ್ತೇನೆ.